ಕರಿಬಸಪ್ಪ ಎಂ. ಜಿ. (ಜಿಗಳಿ ಗ್ರಾಮ) ಮಲೇಬೆನ್ನೂರು, ಹರಿಹರ ತಾಲೂಕ ದಾವಣಗೆರೆ ಜಿಲ್ಲೆ 1966 ರಲ್ಲಿ ಜನನ, ವಿದ್ಯಾಭ್ಯಾಸ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು 1981 ರಿಂದ ಕೃಷಿಯಲ್ಲಿ ನಿರಂತರ ಅಧ್ಯಯನ ಮತ್ತು ಹೊಸ ವಿಷಯಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಮುಖ್ಯವಾಗಿ ದಾಳಿಂಬೆ ಕೃಷಿಯಲ್ಲಿ ಔಷದಿ ಸಿಂಪರಣೆ ಹೆಚ್ಚು ಸಲಹೆ ಕೊಡುವವರ ಹಣತೆಯಂತೆ ಔಷದಿ ಸಿಂಪಡಿಸಿದರೂ ಉತ್ತಮ ಪಸಲು ಬರಲಿಲ್ಲ ಖರ್ಚು ಹೆಚ್ಚಾಗಿ ಔಷದಿ ಅಂಗಡಿಯಲ್ಲಿ ರೂ2.50 ಲಕ್ಷ ಸಲವಾಗಿತ್ತು ಆಗ ಬೇಸತ್ತು ಹೊಸ ವಿಧಾನದ ಹುಡುಕಾಟದಲ್ಲಿದ್ದಾಗ ಈ ಸೋಲಾರ್ ಟ್ರ್ಯಾಪ್ ತಮ್ಮ ಸ್ವಂತಕ್ಕೆ ಅನ್ವೇಷಣೆ ಮಾಡಿದ್ದರು. ಅದರ ಉಪಯೋಗದಿಂದ ರಾಸಾಯನಿಕ ಔಷದಿಯ ಖರ್ಚು ಶೇ 70% ಉಳಿತಾಯವಾಗಿತ್ತು. ನಂತರ ಸ್ನೇಹಿತರಿಗೂ ಬಂಧುಗಳಿಗೂ ತಯಾರಿಸಿ ಕೊಟ್ಟು ಉಪಯೋಗಿಸಲು ಸೂಚಿಸಿದಾಗ ಉತ್ತಮ ಫಲಿತಾಂಶ ಸಿಕ್ಕು ಎಲ್ಲಾ ರೈತರು ಕೇಳಲಾರಂಭಿಸಿದಾಗ ಸೋಲಾರ್ ಟ್ರ್ಯಾಪ್ ನ ಸಣ್ಣ ಉದ್ದಿಮೆಯನ್ನು 18-10-2017 ರಂದು ಪ್ರಾರಂಭಿಸಿದರು. ಅಲ್ಲಿಂದ ಆರಂಭವಾದ ಈ ಕಿರು ಉದ್ದಿಮೆ ಯಶಶ್ವಿಯಾಗಿ ನಡೆಯುತ್ತಿದೆ. ರಾಜ್ಯದ ಹಲವು ಕೃಷಿ ವಿಶ್ವ ವಿದ್ಯಾಲಯಗಳಿಗೆ ಪರೀಕ್ಷಿಸಲು ಕೊಟ್ಟಿದ್ದು ಕೃಷಿ ವಿಜ್ಞಾನಿಗಳು, ಕೀಟ ಶಾಸ್ತ್ರಜ್ಞರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ದೃಢೀಕರಿಸಿ ಹಾಗೂ ರೈತರಿಗೆ ಖರೀದಿಸಿ ಬಳಸಲು ಸಲಹೆ ಕೊಡುತ್ತಿದ್ದಾರೆ.

``ರಾಸಾಯನಿಕ ಔಷದಿ ಖರ್ಚು ಉಳಿಸಿ, ಆಹಾರ ಪದಾರ್ಥಗಳನ್ನು ವಿಷಮುಕ್ತಗೊಳಿಸಿ, ಪ್ರಕೃತಿ ದತ್ತವಾಗಿ ಕೀಟ ನಿಯಂತ್ರಿಸಲು ಎಂಜಿಕೆ ಸೋಲಾರ್ ಟ್ರ್ಯಾಪ್ ಬಳಸಿ.``

ಭೂಮಿ ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು. ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ  ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು  ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ  ಕತ್ತರಿಸಿ.  ಬುಡ ಸಮೇತ ಕಿತ್ತು ಹಾಕುವುದು ಬೇಡ.  ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ.  ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ.  ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ.  ತೋಟದ ಇಳುವರಿಯನ್ನು ಹೆಚ್ಚಿಸುವುದು.  ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ.  ಹೆಚ್ಚಿನ ಮಾಹಿತಿಗಾಗಿ 98809 73218 ಸಂಪರ್ಕಿಸಿ ಧನ್ಯವಾದಗಳು. ಅಥವಾ ವೆಬ್ಸೈಟ್ ನೋಡಿ www.mgksolartrap.com

MEET OUR TEAM

image
pic 4
KUMAR KUNTIKANAMATA

 B.Pharma MBA (London)
Director of Aras Marketing Ltd, England
447715673881

pic 5
DR. BYRAPPA

Entomology Professor
Prague

pic 3
ANIL KUMAR M K

Marketing Manager
    +9901928191

CERTIFICATIONS

image